ದಾಂತೇವಾಡ: ಛತ್ತೀಸ್ ಗಢದ ದಾಂತೇವಾಡದಲ್ಲಿ ಮತ್ತೆ ಮಾವೋವಾದಿಗಳು ಅಟ್ಟಹಾಸ ಮೆರೆದಿದ್ದು, 5 ಸಿಆರ್ ಪಿಎಫ್ ಯೋಧರಿಗೆ ಗಾಯವಾಗಿದ್ದರೆ ಓರ್ವ ಸಿಆರ್ ಪಿಎಫ್ ಯೋಧ ಹುತಾತ್ಮನರಾಗಿದ್ದಾರೆ. .ಸುಧಾರಿತ ಸ್ಫೋಟಕ ಸಾಧನ ಬಳಸಿ ಮಾವೋವಾದಿಗಳು ಈ ದಾಳಿ ನಡೆಸಿದ್ದು, ಸಿಆರ್ ಪಿಎಫ್ ನ ಕಮಲ್ ಪೋಸ್ಟ್ ನಲ್ಲಿ ಈ ಘಟನೆ ನಡೆದಿದೆ..ಐಇಡಿ ಸ್ಫೋಟಿಸುವುದಷ್ಟೇ ಅಲ್ಲದೇ 231 ಬೆಟಾಲಿಯನ್ ನ ಸಿಬ್ಬಂದಿಗಳ ಮೇಲೆ ಮಾವೋವಾದಿಗಳು ಗುಂಡಿನ ದಾಳಿಯನ್ನೂ ನಡೆಸಿದ್ದು, ಈ ಘಟನೆಯಲ್ಲಿ ಓರ್ವ ಮುಖ್ಯಪೇದೆ ಮೃತಪಟ್ಟಿದ್ದಾರೆ. .ಮಾವೋವಾದಿಗಳ ಗುಂಡಿನ ದಾಳಿಗೆ ಸಿಆರ್ ಪಿಎಫ್ ಪ್ರತಿದಾಳಿ ನಡೆಸಿದ್ದು, ಗುಂಡಿನ ಚಕಮಕಿ ಮುಂದುವರೆದಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics